ಕರುನಾಡಕಟ್ಟೋಣ

img

ಕರ್ನಾಟಕದ, ಕನ್ನಡಿಗರ ಕಾವಲಿಗ ನಿಮ್ಮ ವಾಟಾಳ್.

img

ವಾಟಾಳ್ ವಿದಾನಸಭೆಯಲ್ಲಿದ್ದರೆ ಕನ್ನಡಿಗರಿಗೆ ಒಂದು ಶಕ್ತಿ.

ಕನ್ನಡ ಸೇವೆಯ ಹಾದಿಯಲ್ಲಿ

ನನ್ನ ನಡೆ

KCVP

1959 ಕರ್ನಾಟಕ ರಾಜ್ಯ ಹಾಗು ರಾಜಧಾನಿ ಬೆಂಗಳೂರಿನಲ್ಲಿ ನಡೆಯುತಿದ್ದ ಪರ ಭಾಷಿಕರ ಹಾವಳಿ ಪರ ಬಾಷ ಚಿತ್ರಗಳ ಹಾವಳಿ, ಇದರ ವಿರುದ್ಧ ಸಿಡಿದೆದ್ದ ಯುವಕ ಮುಂದೆ ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ಹೋರಾಟ ಮಾಡಿದ್ದು ದೊಡ್ಡ ಇತಿಹಾಸ.. ಡಿ ಎಂ ಕೆ ಪಕ್ಷದ ಸದಸ್ಯರು ಶಾಸಕರಾಗಿ ಬಿ.ಬಿ.ಎಂ.ಪಿ ಸದಸ್ಯರಾಗಿ ರಾಜಧಾನಿಯಲ್ಲಿ ಪಾರುಪತ್ಯ ಸಾಧಿಸ ಹೊರಟಾಗ ಇವನ್ನೆಲ್ಲ ಕಂಡ ಕೆಚ್ಚದೆಯ ಹೋರಾಟಗಾರ ಮುಂದೆ D M K ಸದಸ್ಯರನ್ನು ಸೋಲಿಸಿ 8 ಜನ ಕನ್ನಡ ಚಳವಳಿಗಾರರು ನಗರ ಪಾಲಿಕೆಗೆ ಆಯ್ಕೆ ಆಗುವಂತೆ ನಾಯಕತ್ವ ವಹಿಸಿದ ವಾಟಾಳ್. .

ಇನ್ನಷ್ಟು ತಿಳಿಯಿರಿ

ವಾಟಾಳರ ನೇತ್ನತ್ವದಲ್ಲಿ 8 ಜನ ನಗರ ಪಾಲಿಕೆಗೆ ಕನ್ನಡದ ಹೆಸರಲ್ಲಿ ಗೆದ್ದದ್ದು ಇತಿಹಾಸ, ಇದರ ಕೀರ್ತಿ ವಾಟಾಳ್ ರವರಿಗೆ.


ಅತ್ಯಂತ ಕಿರಿಯ ವಯಸ್ಸಿನಲ್ಲಿ ಕನ್ನಡ ಹೋರಾಟದಲ್ಲೇ ಶಾಸಕರಾಗಿ 1967 ಮೊದಲ ಬಾರಿ ಆಯ್ಕೆ 1967 ರಿಂದ ಒಂದೆ ಪಕ್ಷ 5 ಬಾರಿ ಶಾಸಕರಾಗಿ ಆಯ್ಕೆ, 2 ಬಾರಿ 2 ಕ್ಷೇತ್ರದಲ್ಲಿ ಸ್ಪರ್ಧೆ 50 ವರ್ಷಗಳಿಂದ ಒಂದೇ ಪಕ್ಷ ನಾಡಿನ ಹಿತಕ್ಕಾಗಿ ಎಂದೆಂದಿಗು ರಾಜಿ ಆಗದ, ಯಾವುದೇ ಮುಲಾಜಿಲ್ಲದೆ ಇಂದಿಗೂ ನಾಡಿನ ಹಿತ ಕಾಯುತ್ತಿದ್ದಾರೆ.


ಕನ್ನಡ ನಾಡು ಉಳಿಯಬೇಕಾದರೆ, ಕನ್ನಡಿಗರು ನೆಮ್ಮದಿಯಿಂದ ಕರ್ನಾಟಕದಲ್ಲಿರಬೇಕಾದರೆ, ಕನ್ನಡ ಸಂಸ್ಕೃತಿ ಉಳಿಯಬೇಕಾದರೆ, ಕಾವೇರಿ ನೀರು ಉಳಿಯಬೇಕಾದರೆ, ಮಹದಾಯಿ ವಿವಾದ ಬಗೆಹರಿಯ ಬೇಕಾದರೆ, ವಾಟಾಳ್ ಮುಖ್ಯಮಂತ್ರಿ ಆಗಬೇಕು? ಕನ್ನಡಿಗರೇ ನೀವೇ ತೀರ್ಮಾನಿಸಿ.1) ವಿಧಾನಸಭೆಯಲ್ಲಿ MES ಅಟ್ಟಹಾಸ ಮಟ್ಟ ಹಾಕಬೇಕಾದರೆ, ವಾಟಾಳ್ ವಿದಾನಸಭೆಯೆಲ್ಲಿ ಇರಬೇಕಾದ ಸ್ಥಿತಿ, ಅಧಿಕಾರಕ್ಕಾಗಿ ಎಂದಿಗೂ ರಾಜಿಯಾಗದೆ ನೊಂದ ಜನರ ಧ್ವನಿ ಕನ್ನಡದ ಕಣ್ಮಣಿ ವಾಟಾಳ್ ಮುಖ್ಯಮಂತ್ರಿ ಆದರೆ, ಮೇಕೆದಾಟು ಯೋಜನೆ ಜಾರಿಗೆ, ವಾಟಾಳ್ ಮುಖ್ಯಮಂತ್ರಿ ಆದರೆ ಮಹಾಜನ್ ವರದಿ ಅನ್ವಯ ಕಾಸರಗೋಡು ಕರ್ನಾಟಕಕ್ಕೆ. ವಾಟಾಳ್ ಮುಖ್ಯಮಂತ್ರಿ ಆದರೆ ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿ.
ರಾಜ್ಯದ ಇತಿಹಾಸದಲ್ಲಿ ಪ್ರಭಾಕರ ರೆಡ್ಡಿ ಎಂಬ ಸಾಮಾನ್ಯ ಕನ್ನಡ ಪರ ಹೋರಾಟಗಾರ ಶಾಸಕನಾಗಿ ವಿಧಾನಸಭೆಗೆ ಕಳುಹಿಸಿದ ಕೀರ್ತಿ ವಾಟಾಳರಿಗೆ.


1964ರಲ್ಲಿ ಹೋರಾಟದ ಕಿಚ್ಚಿನಿಂದ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆ.


1967 ಮೊಟ್ಟ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ. ಧರ್ಮಾತೀತ ಜಾತ್ಯತೀತ ಮತದಾನ ವಾಟಾಳರಿಗೆ.


ಒಂದೆ ಬಾರಿ 2 ಕ್ಷತ್ರದಲ್ಲಿ ಸ್ಪರ್ದೆ. ಕರ್ನಾಟಕದ ಪ್ರಾದೇಶಿಕ ಪಕ್ಷ ಕನ್ನಡ ಚಳವಳಿ ವಾಟಾಳ್ ಪಕ್ಷ.


ವಿಶಿಷ್ಟ ವ್ಯಕ್ತಿತ್ವ ಅಪರೂಪದ ಮಾನವಿಯತೆ. 58 ವರ್ಷಗಳ ತಮ್ಮ ಹೋರಾಟ ಜೀವನದಲ್ಲಿ ಎಂದಿಗು ಅನ್ಯ ಪಕ್ಷದವರಿಗೆ ಕದ ತಟ್ಟಿದವರಲ್ಲ.


ಇವರ ವ್ಯಕ್ತಿತ್ವ ನಾಯಕತ್ವ ಹೋರಾಟ ಕಂಡು ಪಕ್ಷಾತೀತವಾಗಿ ವಾಟಾಳರನ್ನ ಎಲ್ಲರು ವಿಧಾನಸಭೆಯಲ್ಲಿ ವಾಟಾಳರು ಮುಖ್ಯ ಮಂತ್ರಿ ಆಗಬೇಕೆಂದು ಅಪೇಕ್ಷಿಸುತಿದ್ದರು.


ಏಕವ್ಯಕ್ತಿತ್ವ ಆಜಾನುಬಾಹು ವಿಧಾನಸಭೆಯಲ್ಲಿ ಎದ್ದು ಮಸೂದೆಯ ಚರ್ಚೆಗೆ ನಿಂತರೆ ಆದರೆ ಆಳ ಅಗಲ ಸಾಧಕ ಬಾಧಕ ಇವುಗಳ ಎಳೆ ಬಿಡಿಸಿಡುತ್ತಿದ್ದ ಚಿಂತಕ.


1972 ಅಭಿಮಾನಿಗಳೆಲ್ಲ ತಮ್ಮ ಸಂಬಳದ ಒಂದು ಬಾಗ ಎಲ್ಲರು ಕೂಡಿಸಿ 6000/- ರೂಗಳು ವಾಟಾಳರಿಗೆ ನೀಡಿ ಕಾರು ಖರೀದಿಸಿ ಕೊಡುತ್ತಾರೆ, ಆ ಕಾರು ಕನ್ನಡ ಅಂಕಿಯ ರಾಜ್ಯದ ಮೊದಲ ಕಾರು ಫಿಯಟ್ ME0 500 ಕನ್ನಡ ಅಂಕಿಯ ರಾಜ್ಯದ ಪ್ರಥಮ ರಥ.

ಐತಿಹಾಸಿಕಘಟನೆಗಳು

ಇದೊಂದು ಐತಿಹಾಸಿಕ ಸಮಾರಂಭ. ರಾಷ್ಟ್ರ ಕವಿ ಕುವೆಂಪುರವರಿಗೂ ವಾಟಾಳ್ ರಿಗೂ ಅಗಾದವಾದ ಪ್ರೀತಿ ವಾತ್ಸಲ್ಯ ಪಕ್ಕದಲ್ಲೇ ನಾಡು ಕಂಡ ಗಾನಕೋಗಿಲೆ ಪಿ. ಕಾಳಿಂಗ ರಾವ್ .

ಶ್ರೀಮತಿ ಇಂದಿರಾಗಾಂಧಿ ಅವರು ನಿಧನರಾದ ದಿನವೇ ರಾಜ್ಯೋತ್ಸವವನ್ನು ರದ್ದು ಮಾಡಿ ಶ್ರದ್ದಾಂಜಲಿ ಸಭೆ ನಡೆಸಿದ ವಾಟಾಳ್ ನಾಗರಾಜ್ ಜೊತೆಯಲ್ಲಿ ಜಿ . ಲಿಂಗಯ್ಯ ಮಾಜಿ ಮೇಯರ್, ಹೆಚ್ . ಎನ್ . ನಂಜೇಗೌಡ, ಕಾರ್ಮಿಕ ಮುಖಂಡ ಹಾಗು ಮಾಜಿ ಶಾಸಕ ವೆಂಕಟೇಶ್, ಕಾಗೋಡು ತಿಮ್ಮಪ್ಪ, ವೈ . ರಾಮಚಂದ್ರ.

ಮಹಾನ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ. ಸಿದ್ದಲಿಂಗಯ್ಯ, ದೇಶದ ಹಿರಿಯ ಮುಖಂಡರಾದ ಎಸ್. ನಿಜಲಿಂಗಪ್ಪ, ಹಾಗು ಕೆಂಗಲ್ ಹನುಮಂತಯ್ಯ, ಜೊತೆಯಲ್ಲಿ ವಾಟಾಳ್ ನಾಗರಾಜ್.

ವಾಟಾಳ್ ನಾಗರಾಜ್ ನಾಯಕತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಭಾಗವಹಿಸಿದ್ದರು.

ಕರ್ನಾಟಕ ನಾಮಕರಣ ರೂವಾರಿ ದೇವರಾಜ ಅರಸು ದಂಪತಿಗಳಿಗೆ ವಾಟಾಳ್ ರಿಂದ ಸನ್ಮಾನ.

ಚಾಮರಾಜ ನಗರ ಕುಡಿಯುವ ನೀರಿನ ಕಾವೇರಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ ಅಂದಿನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ರೊಡನೆ ಯೋಜನೆಯ ರೂವಾರಿ ವಾಟಾಳರು.

ವಾಟಾಳರ ಭಾಷಣ ಸಾವಿರಾರು ಜನ .

ಬಂಗಾರಪೇಟೆ-ಬೆಂಗಳೂರು ರೈಲನ್ನು ಉಳಿಸಲು ಭಾರಿ ರೈಲ್ವೆ ಚಳವಳಿ.

1961 ನೇ ಇಸವಿಯಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ಸುಭಾಷ್ ನಗರ (ಇಂದಿನ ಕೆಂಪೇಗೌಡ ಬಸ್ ನಿಲ್ದಾಣ) ಮೈದಾನದಲ್ಲಿ ವಾಟಾಳರ ಮೆರವಣಿಗೆ.

ನಮ್ಮ ಕರ್ನಾಟಕದ ಹೆಮ್ಮೆ

ವಾಟಾಳ್ ನಾಗರಾಜ್

ನಮ್ಮನ್ನು ಸಂಪರ್ಕಿಸಲು

ವಾಟಾಳ್ ನಾಗರಾಜ್ವೆಬ್ಸೈಟ್ ಉದ್ಘಾಟನೆ !

ಇವತ್ತಿನ ವೆಬ್‌ಸೈಟ್ ಉದ್ಗಾಟನೆಯಲ್ಲಿ ಕನ್ನಡ ಹೋರಾಟಗಾರರು

ವಾಟಾಳ್ ನಾಗರಾಜ್ ಹೋರಾಟ ಕುರಿತಾದ ಪತ್ರಿಕೆ

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕನ್ನಡ ಪರ ಹೋರಾಟಗಾರರು ದಲಿತ ಮುಖಂಡರು ರೈತ ಚಳವಳಿ ಮುಖಂಡರು ಚುನಾವಣೆಯಲ್ಲಿ ಒಂದೇ ವೇದಿಕೆಯಡಿ ಸ್ಪರ್ದಿಸ ಬೇಕೆಂದು ವಿವರಿಸಿದರು.

ವಾಟಾಳ್ ನಾಗರಾಜ್ ವೆಬ್ಸೈಟ್ಗೆ ವಾಟಾಳ್ ನಾಗರಾಜ್ ಕೆ . ಆರ್ ಕುಮಾರ್, ಮಂಜುನಾಥ್ ದೇವ್ , ರಾಮು , ಬಾಲಾಜಿ , ಚಂದ್ರಕುಮಾರ್ ಮತ್ತು ಫೈರೋಜ್ ಚಾಲನೆ ನೀಡಿದರು.

ಪತ್ರಕರ್ತರು ವಾಟಾಳ್ ರ ಚುನಾವಣಾ ಸ್ಪರ್ಧೆ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ವಾಟಾಳ್.

ಯುಗಾದಿ ಹಬ್ಬದ ಪ್ರಯುಕ್ತ

ಬೆಳ್ಳಿರಥದಲ್ಲಿ ಸಂಚರಿಸಿ ನಾಡಿನ ಜನತೆಗೆ ಶುಭ ಕೋರಿದ ವಾಟಾಳ್, ಇದೇ ಸಂದರ್ಭದಲ್ಲಿ ನೆರೆದಿದ್ದ ಜನರಿಗೆ ಬೇವು ಬೆಲ್ಲ ಹಂಚಿದ ವಾಟಾಳ್ ನಾಗರಾಜ್

ಅಲ್ಪ ಸಂಖ್ಯಾತ ಮಹಿಳೆಗೆ ಯುಗಾದಿ ಪ್ರಯುಕ್ತ ಬೇವು ಬೆಲ್ಲ ಹಂಚಿದ ವಾಟಾಳ್ ರವರು

ಬೇವು ಬೆಲ್ಲ ಹಂಚುತ್ತಿರುವ ವಾಟಾಳ್ .

ಯುಗಾದಿ ಶುಭಾಶಯ ಕೋರಿ ಜನರತ್ತ ಕೈ ಬೀಸುತ್ತಿರುವ ವಾಟಾಳ್ ರವರು.

ಕನ್ನಡಿಗನಿಗೆ ಸಂತಸದಿಂದ ಬೇವು ಬೆಲ್ಲ ಹಂಚಿದ ವಾಟಾಳ್ ನಾಗರಾಜ್ ರವರು.

ಬ್ರಷ್ಟಾಚಾರ ಜಾತಿ

ಸುಮಾರು 40 ವರ್ಷಗಳ ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ಅಂದರೆ 10 /12 /1978 ರಲ್ಲಿ ವಾಟಾಳ್ ರವರ ಕುರಿತಾದ ಸುದ್ದಿ , ಹಾಗು ರಾಜ್ಯೋತ್ಸವದ ಜಾಹಿರಾತ. ವಾಟಾಳರ ಧ್ವನಿಯಲ್ಲಿ ಕೇಳಿ.

ಬ್ರಷ್ಟಾಚಾರ ಜಾತಿ ಹಣ ರಹಿತ ಚುನಾವಣೆಗೆ ಆಗ್ರಹಿಸಿ ನಿಮ್ಮ ವಾಟಾಳ್ ನೇತೃತ್ವದಲ್ಲಿ ತಮಟೆ ಚಳವಳಿ...

ಪತ್ರಿಕಾ ಭೇಟಿ

ಇಂದು ಮುಕ್ತ ಹಾಗು ನ್ಯಾಯಸಮ್ಮತ, ಜಾತಿ ಹಣ ಬ್ರಷ್ಟರಹಿತ ಚುನಾವಣೆ ನಡೆಸಬೆಕೆಂದು ಆಗ್ರಹಿಸಿ ತಮಟೆ ಚಳವಳಿ ನಡೆಸಿದ ವಾಟಾಳ್, ಕುಮಾರ್ ರವರು.. ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದರು

ಪತ್ರಿಕಾ ಗೋಷ್ಠಿಯಲ್ಲಿ

ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗು ವಾಟಾಳ್ ನಾಗಾರಾಜ್ ರವರ ನಾಯಕತ್ವದಲ್ಲಿ ಕನ್ನಡ ಪರ ಹೋರಾಟಗಾರರು ರೃತ ಚಳವಳಿ ನಾಯಕರು ದಲಿತ ಚಳವಳಿ ನಾಯಕರು ಎಲ್ಲಾ ಸೇರಿ ಒಂದೆ ವೇದಿಕೆಯಲ್ಲಿ ಕರ್ನಾಟಕ ಪ್ರಜಾ ಸಂಯುಕ್ತ ರಂಗ ದಿಂದ ಕನಿಷ್ಟಪಕ್ಷ 100 ಜನ ಹೋರಾಟಗಾರರು ನಿಲ್ಲಬೇಕು ಜನ ಇವರನ್ನು ಗೆಲ್ಲಿಸಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಮೋಟಾರು ಸೈಕಲ್‌ ಜಾತ್ರಾ ನಡೆಸಲಾಯಿತ

ಒತ್ತಾಯಿಸಿ‌ ಪ್ರತಿಭಟಿಸಲಾಯಿತು...

ಚುನಾವಣೆಯಲ್ಲಿ ಜಾತ್ಯಾತೀತ ಹಾಗು ಭ್ರಷ್ಟಾಚಾರ...

ಚ೦ದಕವಾಡಿಯಲಿೣ ಚುನಾವಣಾ...

ಚಂಧಕವಾಡಿ ಹೋಬಳಿಯ ವಾಟಾಳ್ ನಾಗರಾಜ್ ರವರು ಬೇಟಿ ನೀಡಿದ ಗ್ರಾಮಗಳಾದ ಬಸಪ್ಪನ ಪಾಳ್ಯ ಸರಗೂರು ಪುಟ್ಟನಪುರ ಮಂಚ್ಗುಂದಿಪುರ ಚಂಧಕವಾಡಿ ಕೆ. ಬಸವನಪುರ ಕೊಡಿಮೂಳೆ ಗ್ರಾಮಗಳಿಗೆ ಬೇಟಿ ನೀಡಿದ್ದರು

ಕಾವೇರಿ ನಿರ್ವಹಣಾ ಮಂಡಳ...

ಕಾವೇರಿ ನಿರ್ವಹಣಾ ಮಂಡಳಿ ರಚಿಸಭಾರದೆಂದು ಒತ್ತಾಯಿಸಿ ವಾಟಾಳ್ ನಾಗರಾಜ್ ನಾಯಕತ್ವದಲ್ಲಿ ಕನ್ನಡ ಒಕ್ಕೂಟ ಮುಖಂಡರಾದ ಸಾರಾ ಗೋವಿಂದು ಮಂಜುನಾಥ್ ದೇವ ಸತೀಶ್ ಗಿರೀಶ್ ಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇಂದು ಗಡಿಬಂದ್ ನಡೆಸಿದರು..

ಬೆಂಬಲಿಸಿ ನಾಡು ಉಳಿಸಿ.

9 ರಂದು ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದರೆ 12 ರಂದು ನಿರ್ವಹಣಾ ಮಂಡಳಿ ರಚನೆ ವಿರೋದಿಸಿ ಅಗಂಡ ಕರ್ನಾಟಕ ಬಂದ್ ಶತಸಿದ್ಧ.... ಬೆಂಬಲಿಸಿ ನಾಡು ಉಳಿಸಿ.

ಕನ್ನಡ ಒಕ್ಕೂಟ ದ ಅಧ್ಯಕ್ಷ ವಾಟಳ್ ನಾಗರಾಜ್ ಸಾರಾ ಗೋವಿಂದ್ ಕುಮಾರ್ ಸೇರಿದಂತೆ ಒಕ್ಕೂಟದ ಮುಖಂಡರೆಲ್ಲ ಪತ್ರಿಕಾ ಗೋಷ್ಠಿಯಲ್ಲಿ..

ರಜನಿಕಾಂತ್ ಕಮಲ್ ಹಾಸನ್ ರ ಅವೈಜ್ಞಾನಿಕ ಹೋರಾಟದ ವಿರುದ್ಧ ಗುಡುಗಿದ ವಾಟಾಳ್ ನಾಗರಾಜ್.. ಮುಂಬರುವ ಚುನಾವಣೆಯಲ್ಲಿ ಕನ್ನಡ ಪರ ಹೋರಾಟಗಾರರಿಗೆ ಮತ ನೀಡಬೇಕೇಂದು ವಿನಂತಿಸಿದರು...

ಕೇಂದ್ರ ಸರ್ಕಾರ ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಮಾಡಬಾರದೆಂದು ಒತ್ತಾಯಿಸಿ ದಿನಾಂಕ 13 /04 /2018 ರಂದು, ರಾಜಭವನಕ್ಕೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ನಮಗೆ ತಡೆಯೊಡೈಡ್ ಬಂದಿಸಿದರು. ವಾಟಾಳ್ ನಾಗರಾಜ್ ರವರ ನೇತೃತ್ವದ ಈ ಹೋರಾಟದಲ್ಲಿ ಸಾ. ರಾ. ಗೋವಿಂದ್ ರವರು. ಗಿರೀಶ್ ಗೌಡ್ರು. ಸತೀಶ್, ನಾರಾಯಣ ಸ್ವಾಮಿ , ವಿಶ್ವನಾಥ್, ಡಿ. ಕೆ. ರಾಜು ರಾಯಸಂದ್ರ ಬಾಬು ಮತ್ತುಅನೇಕರು ಭಾಗವಯಿಸಿದ್ದರು....

ಶ್ರೀ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ

ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಸಂವಿಧಾನ ಶಿಲ್ಪಿ ದಲಿತ ದೈವ ಅಂಬೇಡ್ಕರ್ ಜಯಂತಿ ಆಚರಿಸಿ ಕೆಂಪೇಗೌಡ ರಸ್ತೆಯಾದ್ಯಂತ ಮೆರವಣಿಗೆ ನಡೆಸಲಾಯಿತು...

ಚುನಾವಣೆ ಪ್ರಚಾರದಲ್ಲಿ ಚಾಮರಾಜನಗರ ಜನತೆಯೊಂದಿಗೆಲಿ

ಚಾಮರಾಜನಗರ ಕ್ಷೇತ್ರ ಜನತೆಯೊಂದಿಗೆ ಚುನಾವಣೆ ಪ್ರಚಾರದಲ್ಲಿಿ

ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ಬಸವಣ್ಣನವರ ಜಯಂತಿ ಆಚರಣೆ ಹಾಗು ಕೆಂಪೇಗೌಡ ರಸ್ತೆಯಲ್ಲಿ ಮೆರವಣಿಗೆ ...

ಪುಣಜನೂರು ಗ್ರಾಮದಲ್ಲಿ ವಾಟಾಳ್ ನಾಗರಾಜ್ ರವರು ಚುನವಣಾ ಪ್ರಚಾರ ಮಾಡಿದರು ...

ಕೋಳೀ ಪಾಳ್ಯ ಮೂಕನಪಾಳ್ಯ ವೀರನಪುರ ಬನವಾಡಿ ಗೋಡೆಮಾಡು ಗ್ರಾಮಗಳಲ್ಲಿ ವಾಟಾಳ್ ನಾಗರಾಜ್ ಮತಯಾಚನೆ ಮಾಡಿದರು ...

ವಾಟಾಳ್ ಸಾಹೇಬರು ಸುತ್ತೂರು ಮಠದ ಸ್ವಾಮೀಜಿ ಮತ್ತು ವಾಟಾಳ್ ಮಠದ ಸ್ವಾಮೀಜಿ ಅವರೊ೦ದಿಗೆ ...

ರಾಮಸಮುದ್ರ. ಚನ್ನಿಪುರದ ಮೋಳೆ. ಕೋಡಿಮೋಳೆ. ಮುಸ್ಲಿಂರ ಬಡವಾಣೆ.ಹೊನ್ನಹಳ್ಳಿ.ಉಗೆನೆದ ಹುಂಡಿ.ಸಾಣೆಗಾಲ.ಕೆಬ್ಬೆಪುರ.ಗ್ರಾಮಗಳಿಗೆ ಚುನಾವಣಾ ಪ್ರಚಾರಕ್ಕಾಗಿ ವಾಟಳ್ ನಾಗರಾಜುರವರು ಬೇಟೆ ನೀಡಿದರು ...

ವಾಟಾಳ್ ನಾಗರಾಜ್ ರವರ ಚುನಾವಣ ಪ್ರಚಾರ ಚಾಮರಾಜನಗರ ದ ಪ್ರಮುಖ ಬೀದಿಗಳಲ್ಲಿ ಇಂದು ಬೃಹತ್ ಮೆರವಣಿಗೆ ನಡೆಯತು ಸಾವಿರಾರು ಅಬಿಮಾನಿಗಳು ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು ...

ಅನುಪಮ ವಾಟಾಳ್ ಹಾಗು ವಾಟಾಳ್ ನಾಗರಾಜ್ ರವರು ಕನ್ನಡ ಚಳವಳಿ ವಾಟಾಳ್ ಪಕ್ಷದ ಚುನಾವಣಾ ಪ್ರಣಾಳಿಕಾ ಬಿಡುಗಡೆ ಮಾಡಿದರು....

ಯೋಗ ಮಾಡಿದರೆ ಇಲ್ಲ ರೋಗ ವಾಟಾಳ್ ನಾಗರಾಜ್ ರವರಿಂದ ವಿವಿದ ಯೋಗಾಸನದ ಪ್ರದರ್ಶನ

ಉಚಿತ ಬಸ್ ಪಾಸ್ ಪ್ರತಿಭಟನೆ

ಕನ್ನಡ ನಾಡಿಗೆ ಸದಾ ಮಿಡಿಯುವ ನೆಚ್ಚಿನ ನಾಯಕ ವಾಟಾಳ್ ನಾಗರಾಜ್ ರವರು ಕರುಣಾನಿಧಿಯವರಿಗೆ ಸಂತಾಪ ಸೂಚಿಸಿ.. ಕರುಣಾನಿಧಿ ಅವರೊಂದಿಗಿನ ಒಡನಾಟ ಬೇಟಿಯಾದ ಸಂದರ್ಭ ಮೆಲುಕು ಹಾಕಿದ್ದು ಬಹಳ ರೋಚಕ.. ಇಬ್ಬರು ಅವರವರ ನಾಡಿಗಾಗಿ ಮಿಡಿದ... ಹಾಗು ಮಾನವತಾವಾದಿ ಗುಣ ಹೊಂದಿರುವ ನಾಯಕರ ಸಮಾಗಮ ಬೇಟಿ ಆದದ್ದು ವುಡ್ ಲ್ಯಾಂಡ್ ಹೋಟೆಲ್ನಲ್ಲಿ ಅದು ೧೯೭೨ ರ ಸಂದರ್ಭದಲ್ಲಿ.. ನಂತರ ಜೆ ಹೆಚ್ ಪಟೇಲರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ... ಕರುಣಾನಿಧಿ ರಾಜ್ಯ ಬೇಟಿ ಸಂದರ್ಭದಲ್ಲಿ ಪಟೇಲರನ್ನ ಕೇಳಿದ ಮೊದಲ ವ್ಯಕ್ತಿ ಎಂದರೆ ನಮ್ಮ ಹೆಮ್ಮೆಯ ನಾಯಕ ವಾಟಾಳ್ ನಾಗರಾಜ್.. ಇಬ್ಬರಲ್ಲೂ ಕಾಣಬಹುದಾದ ಸಾಮ್ಯತೆ.. ಇಬ್ಬರು ಅವರವರ ಭಾಷೆ ನುಡಿ ನೆಲ ಜಲ ಉದ್ಯೋಗ ಸಂಸ್ಕೃತಿಗಾಗಿ ಹೋರಾಡಿದ ನಾಯಕರುಗಳು.. ಇದರಾಚೆಗೆ ಮಹಾನ್ ಮಾನವತಾವಾದಿಗಳು.. ಕರುಣಾನಿಧಿಯ ಮರಣಕ್ಕೆ ಅತಿವ ಧುಖ ಸಂತಾಪ ವ್ಯಕ್ತ ಪಡಿಸಿದ ನಾಯಕ ವಾಟಾಳ್ ನಾಗರಾಜ್..

ವಾಟಾಳ್ ನಾಗರಾಜ್ ನೇತೃತ್ವದಲ್ಲಿ. ಈಗಾಗಲೆ ತಮಿಳುನಾಡಿನಲ್ಲಿ ಸಾಕಷ್ಟು ನೀರು ಇದೆ. ಹಾಗಿದ್ದರೂ ಹೆಚ್ಚುವರಿ ನೀರು ಬಿಡಬೇಕೆಂದು ತಮಿಳುನಾಡು ಖ್ಯಾತೆ ತೆಗೆಯುತ್ತಿರುವುದರ ವಿರುದ್ಧ ತಮಿಳುನಾಡಿನ ಭೂತ ಸುಟ್ಟು ಪ್ರತಿಭಟನೆ. ಹಾಗು ತಮಿಳು ನಾಡಿಗೆ ಯಾವುದೆ ಕಾರಣಕ್ಕು ನೀರು ಬಿಡಬಾರದು ಎಂದು ಒತ್ತಾಯಿಸಿದರು. ಹಾಗು ರಾಜ್ಯ ಸರ್ಕಾರ ಕೂಡಲೆ ಮೇಕೆದಾಟು ಯೋಜನೆಯ ಆರಂಭಿಸಬೇಕೆಂದು ಒತ್ತಾಯಿಸಿದ ವಾಟಾಳ್ ನಾಗರಾಜ್.. ಒಕ್ಕೂಟದ ಮುಖಡರಾದ ಗಿರೀಶ್ ಗೌಡ ಸತೀಶ್ ರಾಜು ಭಾಗವಹಿಸಿದ್ದರು

ವಾಟಾಳ್ನಾಗರಾಜ್ ನೇತೃತ್ವದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಎರಿಕೆ ವಿರುದ್ದ ಸೈಕಲ್ ಎರಿ ಮೈಸೂರು ಬ್ಯಾಂಕ್ ವ್ರತ್ತದಿಂದ ಕೆಂಪೇಗೌಡ ಬಸ್ ನಿಲ್ದಾಣದ ವರೆಗೆ ಸೈಕಲ್‌ ತುಳಿದು ಪ್ರತಿಭಟನೆ ನಡೆಸಿದರು.

ಪೆಟ್ರೋಲ್ ಡೀಸೆಲ್‌ ಗ್ಯಾಸ್ ಬೆಲೆ ಎರಿಕೇ ಖಂಡಿಸಿ ವಾಟಾಳ್ ನಾಗರಾಜ್ ಎಮ್ಮೆ ಮೇಲೆ ಸವಾರಿ ಮಾಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ವಾಟಾಳ್ ನೇತೃತ್ವದಲ್ಲಿಕನ್ನಡ ಒಕ್ಕೂಟದ ನಾಯಕರೆಲ್ಲ ವಾಟಾಳ್ ರ ಹೋರಾಟಕ್ಕೆ ಬೆಂಬಲಿಸಿದರು.

ವಾಟಾಳ್ ನಾಗರಾಜ್ ರವರ ಹುಟ್ಟು ಹಬ್ಬವನ್ನು ವಿಷೇಶ ಹಾಗು ವಿನೂತನವಾಗಿ ವಾಟಾಳ್ ರವರಿಗೆ ಮೊಟ್ಟ ಮೊದಲು ಹೋರಾಟದ ಸಮಯದಲ್ಲಿ ಬೂಟ್ ಕಾಲಿನಲ್ಲಿ ಒದ್ದ ದಿನವನ್ನು ತಮ್ಮ ಹುಟ್ಟು ಹಬ್ಬವಾಗಿ ಆಚರಿಸಿಕೊಳ್ಳುವ ವಾಟಾಳರು.. ಹಾಗು ಶುಭಾಶಯ ಕೋರಿದ ಸಾವಿರಾರು ಅಭಿಮಾನಿಗಳು

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ೧೫೦ನೆ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕದಲ್ಲಿ ವಿಶ್ವವನ್ನೆ ಮೀರಿಸುವಂಥ ದೊಡ್ಡ ಪ್ರತಿಮೆ ಸ್ಥಾಪನೆಯಾಗಬೇಕೆಂದು ವಾಟಾಳ್ ನಾಗರಾಜ್ ರವರು ಸರ್ಕಾರವನ್ನು ಒತ್ತಾಯಿಸಿದರು

ವಾಟಾಳ್ ನಾಗರಾಜ್ ರವರು ಟಿಪ್ಪು ಜನ್ಮಸ್ಥಳ ದೇವನಹಳ್ಳಿಗೆ ಬೇಟಿ ನೀಡಿ ಟಿಪ್ಪು ಜಯಂತಿ ಆಚರಿಸಿ ಟಿಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು..

೬೩ನೇ ಅದ್ದೂರಿ ಕನ್ನಡ ರಾಜ್ಜೋತ್ಸವ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೃಪತುಂಗ ಮಹಾಮಂಟಪದಲ್ಲಿ ಐತಿಹಾಸಿಕ ಕನ್ನಡ ರಾಜ್ಜೋತ್ಸವವನ್ನು ವಿಜೃಂಭಣೆಯಿಂದ ನಾಡ ವೈಭವ ಸಾರುವ ಕಲಾತಂಡ ಕಲಾಕೃತಿಗಳು ನಾಡ ಕಲೆ ಸಾರುವ ಕಲಾಕೃತಿಗಳ ಮೆರವಣಿಗೆ ನಗರಾದ್ಯಂತ ಮೆರವಣಿಗೆನಡೆಸಿದರು.

೬೩ನೇ ಅದ್ದೂರಿ ಕನ್ನಡ ರಾಜ್ಜೋತ್ಸವ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೃಪತುಂಗ ಮಹಾಮಂಟಪದಲ್ಲಿ ಐತಿಹಾಸಿಕ ಕನ್ನಡ ರಾಜ್ಜೋತ್ಸವವನ್ನು ವಿಜೃಂಭಣೆಯಿಂದ ನಾಡ ವೈಭವ ಸಾರುವ ಕಲಾತಂಡ ಕಲಾಕೃತಿಗಳು ನಾಡ ಕಲೆ ಸಾರುವ ಕಲಾಕೃತಿಗಳ ಮೆರವಣಿಗೆ ನಗರಾದ್ಯಂತ ಮೆರವಣಿಗೆನಡೆಸಿದರು.

೬೩ನೇ ಅದ್ದೂರಿ ಕನ್ನಡ ರಾಜ್ಜೋತ್ಸವ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೃಪತುಂಗ ಮಹಾಮಂಟಪದಲ್ಲಿ ಐತಿಹಾಸಿಕ ಕನ್ನಡ ರಾಜ್ಜೋತ್ಸವವನ್ನು ವಿಜೃಂಭಣೆಯಿಂದ ನಾಡ ವೈಭವ ಸಾರುವ ಕಲಾತಂಡ ಕಲಾಕೃತಿಗಳು ನಾಡ ಕಲೆ ಸಾರುವ ಕಲಾಕೃತಿಗಳ ಮೆರವಣಿಗೆ ನಗರಾದ್ಯಂತ ಮೆರವಣಿಗೆನಡೆಸಿದರು.

ಸಮಗ್ರಘಡಿನಾಡು ಅಬಿವೃದ್ದಿ ಬಗ್ಗೆ ಸರಕಾರದ ಗಮನ ಸೆಳೆಯಲು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪತ್ರಿಕಾಗೋಷ್ಟಿ...

ವಾಟಾಳ್ ನಾಗರಾಜ್ ನೇತೃತ್ವದಲ್ಲಿ. ಟಿಪ್ಪು ಸಮಾಧಿಗೆ ಆಗಮಿಸಿ ಪುಷ್ಪ ನಮನ ಸಲ್ಲಿಸಿದ ವಾಟಾಳ್ ಸಾಹೇಬರು ಹಾಗು ನುರಾರು ಕಾರ್ಯಕರ್ತರು.

ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ.. ೨.೦ ಚಿತ್ರಕ್ಕೆ ಹೆಚ್ಚು ಚಿತ್ರಮಂದಿರ ನೀಡಿದ್ದು ತಡೆಯುವಲ್ಲಿ ಪರಭಾಷೆ ಚಿತ್ರಗಳ ನಿಯಂತ್ರಣದಲ್ಲಿ ವಿಫಲವಾದ ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿದ ವಾಟಾಳರು ಹಾಗು ಕನ್ನಡ ಒಕ್ಕೂಟದ ಮುಖಂಡರು...

೨.೦ ಚಿತ್ರಕ್ಕೆ ಚಿತ್ರಮಂದಿರ ನೀಡಬಾರದು ಹಾಗು ಕನ್ನಡ ಚಿತ್ರಗಳಿಗವ ಮೊದಲ ಆದ್ಯತೆ ಸಿಗಬೇಕೆಂದು ಉರ್ವಶಿ ಚಿತ್ರಮಂದಿರದೆದುರು ವಾಟಾಳ್ ನಾಗರಾಜ್ ರವರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ.. ಹಾಗು ಮುತ್ತಿಗೆ.. ಹಾಕಲಾಯಿತು.

ವಾಟಾಳ್ ನಾಗರಾಜ್ ಅಂತರಾಳದಲ್ಲಿ ಅಂಬರೀಶ್ ಹಾಗು ವಾಟಾಳ್ ರ ಸ್ನೇಹ ಅಮರ. ಕನ್ನಡಕ್ಕಾಗಿ ಕಾವೇರಿಗಾಗಿ ರೈತರಿಗಾಗಿ ಸದಾ ಅಂಬರೀಶ್ ನಮ್ಮೊಂದಿಗಿರುತ್ತಿದ್ದರು.. ಕಾವೇರಿ ನ್ಯಾಯಕ್ಕಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರನಡೆದಿದ್ದರು.. ತಮ್ಮ ರಾಜಕೀಯ ಜೀವನದುದ್ದಕ್ಕುೂ ವಿಶೇಷ ವ್ಯಕ್ತಿತ್ವ ಹೊಂದಿದ್ದ ಅಪರೂಪದ ನಾಯಕ ಅಂಬರೀಶ್.. ಒಳ್ಳೆಯ ಸ್ನೇಹ ಜೀವಿ. ಅಂಬರೀಶ್.. ಇವರ ಆತ್ಮಕ್ಕೆ ಶಾಂತಿ ಸಿಗಲಿ... ಶೋಕ ಸಂದೇಶ ವಾಟಾಳ್ ನಾಗರಾಜ್ ಕನ್ನಡ ಚಳವಳಿ ವಾಟಾಳ್ ಪಕ್ಷ.

ಹಂಪೆಯ ಸಮಗ್ರ ಅಬಿವೃದ್ದಿಗೆ ಒತ್ತಾಯಿಸಿ ಧರಣಿ..

ಇಂದು ರಾಮನಗರದಲ್ಲಿ ಮೇಕೇದಾಟು ಯೋಜನೆ ಜಾರಿ ಆಗಲೆಬೇಕು ಅಂತ ವತ್ತಾಯಿಸಿ ಪ್ರತಿಭಟನೆ..

ನಮ್ಮನ್ನುಸಂಪರ್ಕಿಸಲು

  • ಕರ್ನಾಟಕ

#489/138, 7ನೇ, ಮೇನ್, ರೋಡ್, ಆರ್.ಪಿ.ಸಿ ಲೇಔಟ್, ವಿಜಯನಗರ, ಬೆಂಗಳೂರು - 560040

+91 98861 71989

kcvp@vatalnagaraj.com

8921 California Long Beach PO Box 8921

012 345 6789

kcvp@vatalnagaraj.com

ಸಂಪರ್ಕದಲ್ಲಿರಲು